Bunts sangha banglore yaksha sambhrama programme

ಬಂಟರ ಸಂಘ ಬೆಂಗಳೂರಿನಲ್ಲಿ ‘ಯಕ್ಷ ಸಂಭ್ರಮ’ – ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಪ್ರದರ್ಶನ ಇಂದು

ಬೆಂಗಳೂರು: ಬಂಟರ ಸಂಘ ಬೆಂಗಳೂರು ಹಾಗೂ ಯಕ್ಷಗಾನ ಮತ್ತು ರಂಗ ತರಬೇತಿ ಸಮಿತಿಯ ಸಂಯುಕ್ತ ಆಶ್ರಯದಲ್ಲಿ “ಯಕ್ಷ ಸಂಭ್ರಮ” ಕಾರ್ಯಕ್ರಮದ ಅಂಗವಾಗಿ ತೆಂಕು-ಬಡಗಿನ ಅದ್ದೂರಿ ಯಕ್ಷಗಾನ “ಶ್ರೀ ದೇವಿ ಮಹಾತ್ಮೆ” ಇಂದು (ಜೂನ್ 06, ಶನಿವಾರ) ಮಧ್ಯಾಹ್ನ 3 ಗಂಟೆಯಿಂದ ವಿಜಯನಗರದ ಬಂಟರ ಸಂಘದ ಸಭಾಂಗಣದಲ್ಲಿ ನಡೆಯಲಿದೆ.

ಈ ವಿಶೇಷ ಯಕ್ಷಗಾನ ಪ್ರದರ್ಶನದಲ್ಲಿ ಖ್ಯಾತ ಕಲಾವಿದರಾದ ಜನ್ಸಾಲೆ, ಸುರೇಶ ಶೆಟ್ಟಿ, ಕಾವ್ಯಶ್ರೀ, ಪೆರ್ಮುದೆ, ಐರಬೈಲ್, ಯಳಬೇರು, ಬಡಬಾಳ್, ಹಕ್ಲಾಡಿ, ನಿತೀನ್, ಪೆರ್ಲ ಹಾಗೂ ಗಜಗಟ್ಟಿ ಸೇರಿದಂತೆ ಹಲವು ಅನುಭವಿ ಕಲಾವಿದರು ಭಾಗವಹಿಸಲಿದ್ದು, ಅವರೊಂದಿಗೆ ಯುವ ಪ್ರತಿಭೆಗಳ ಅಪರೂಪದ ಸಮಾಗಮವೂ ಈ ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಲಿದೆ.

Also Read: ಬೆಂಗಳೂರು ಬಂಟರ ಸಂಘದ ಸಮಾಜಸೇವಾ ಕಾರ್ಯ: 46 ಮಂದಿಗೆ ಉಚಿತ ಹೊಲಿಗೆ ಯಂತ್ರ

ಯಕ್ಷಗಾನ ಪ್ರೇಮಿಗಳಿಗೆ ಸಾಂಪ್ರದಾಯಿಕ ಹಾಗೂ ಮನರಂಜನಾತ್ಮಕ ಕಲಾ ವೈಭವವನ್ನು ಸವಿಯುವ ಅಪೂರ್ವ ಅವಕಾಶ ಇದಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಆಯೋಜಕರು ಮನವಿ ಮಾಡಿದ್ದಾರೆ.

ಕಾರ್ಯಕ್ರಮಕ್ಕೆ ಪ್ರವೇಶ ಸಂಪೂರ್ಣ ಉಚಿತವಾಗಿರುತ್ತದೆ.

ಸ್ಥಳ: ಬಂಟರ ಸಂಘ, ವಿಜಯನಗರ, ಬೆಂಗಳೂರು
ದಿನಾಂಕ: ಜೂನ್ 06, ಶನಿವಾರ
ಸಮಯ: ಮಧ್ಯಾಹ್ನ 3.00 ಗಂಟೆಯಿಂದ
ಪ್ರವೇಶ: ಉಚಿತ

Leave a Comment

Your email address will not be published. Required fields are marked *

Scroll to Top