ಕುಂದಾಪುರ: ಕುಂದಾಪುರದ ಪ್ರತಿಷ್ಠಿತ ಭಂಡಾರ್ಕಾರ್ಸ್ ಕಾಲೇಜಿನ ಕನ್ನಡ ವಿಭಾಗದ ಸಹ ಪ್ರಾಧ್ಯಾಪಕರಾದ ಸುಖಾನಂದ ಶೆಟ್ಟಿ ಅಂಪಾರು ಅವರು ಸಲ್ಲಿಸಿದ ‘ಕೊಲ್ಲೂರು ಒಂದು ಸಾಂಸ್ಕೃತಿಕ ಅಧ್ಯಯನ’ (A Cultural Study in Kolluru) ಮಹಾಪ್ರಬಂಧಕ್ಕೆ ಪ್ರತಿಷ್ಠಿತ ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (MAHE) ವಿಶ್ವವಿದ್ಯಾಲಯವು ಡಾಕ್ಟರೇಟ್ ಪದವಿಯನ್ನು ನೀಡಿ ಗೌರವಿಸಿದೆ.
ಹೆಸರಾಂತ ಲೇಖಕಿ ಹಾಗೂ ವಿಶ್ರಾಂತ ಪ್ರಾಧ್ಯಾಪಕರಾದ ಡಾ. ರೇಖಾ ಬನ್ನಾಡಿಯವರ ಮಾರ್ಗದರ್ಶನದಲ್ಲಿ, ಮಾಹೆಯ ಪ್ರಾದೇಶಿಕ ಜಾನಪದ ರಂಗಕಲೆಗಳ ಅಧ್ಯಯನ ಕೇಂದ್ರದ ಮೂಲಕ ಶ್ರೀಯುತರು ಈ ಸಂಶೋಧನಾ ಮಹಾಪ್ರಬಂಧವನ್ನು ಪೂರ್ಣಗೊಳಿಸಿದ್ದಾರೆ. ಕೊಲ್ಲೂರಿನ ಸಾಂಸ್ಕೃತಿಕ ಪರಂಪರೆ, ಜಾನಪದ ಬದುಕು ಮತ್ತು ಸಾಮಾಜಿಕ-ಧಾರ್ಮಿಕ ವೈಶಿಷ್ಟ್ಯಗಳನ್ನು ಒಳಗೊಂಡ ಈ ಅಧ್ಯಯನವು ಶೈಕ್ಷಣಿಕ ವಲಯದಲ್ಲಿ ವಿಶೇಷ ಗಮನ ಸೆಳೆದಿದೆ.
Also Read: ಕುಂದಾಪುರದ ಹೈದನ ‘ಅಡ್ವಾನ್ಸ್ಡ್’ ಸಾಧನೆ: JEE ಪರೀಕ್ಷೆಯಲ್ಲಿ ದೇಶಕ್ಕೆ 1005ನೇ ರ್ಯಾಂಕ್ ಪಡೆದ ರಿತಿನ್ ಶೆಟ್ಟಿ
ಸುಖಾನಂದ ಶೆಟ್ಟಿ ಅಂಪಾರು ಅವರು ಬ್ರಹ್ಮಾವರ ಹೇರೂರಿನ ದೊಡ್ಡಮನೆ ನಿವಾಸಿಗಳಾದ ನಿವೃತ್ತ ಪದವೀಧರ ಮುಖ್ಯೋಪಾಧ್ಯಾಯ ಎಚ್. ಬಿ. ಬಾಬಯ್ಯ ಶೆಟ್ಟಿ ಹಾಗೂ ಶಾರದಾ ಬಿ. ಶೆಟ್ಟಿಯವರ ಪುತ್ರರಾಗಿದ್ದಾರೆ.
ಅವರ ಈ ಶೈಕ್ಷಣಿಕ ಸಾಧನೆಗೆ ಶಿಕ್ಷಣ ಕ್ಷೇತ್ರದ ಗಣ್ಯರು, ಸಹೋದ್ಯೋಗಿಗಳು, ವಿದ್ಯಾರ್ಥಿಗಳು ಹಾಗೂ ಬಂಧು-ಮಿತ್ರರು ಅಭಿನಂದನೆ ಸಲ್ಲಿಸಿದ್ದಾರೆ.
Doctorate to Sukhananda Shetty for his thesis Kollur as a Cultural Study


