ರಾಯರ ಆರಾಧನಾ ಮಹೋತ್ಸವಕ್ಕೆ ಭಕ್ತಿಸೇವೆಯ ಸಿಹಿಸ್ಪರ್ಶ: ಮಂತ್ರಾಲಯದಲ್ಲಿ ಸುಮಾರು 75 ಸಾವಿರ ಹೋಳಿಗೆ ವಿತರಣೆ
ಬೆಂಗಳೂರು: ಶ್ರೀ ಗುರುರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವದ ಅಂಗವಾಗಿ ಆ. 29, 30 ಮತ್ತು 31ರಂದು ಮಂತ್ರಾಲಯದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಈ ಹಿನ್ನೆಲೆಯಲ್ಲಿ ರಾಯರ ಮಧ್ಯಾರಾಧನಾ ದಿನವಾದ ಆ. 30ರಂದು ಮಂತ್ರಾಲಯಕ್ಕೆ ಆಗಮಿಸುವ ಭಕ್ತರಿಗೆ ವಿಶೇಷ ಪ್ರಸಾದವಾಗಿ ಹೋಳಿಗೆ ವಿತರಿಸುವ ಸೇವೆಯನ್ನು ಬೆಂಗಳೂರಿನ ಹೋಳಿಗೆ ಮನೆಯ ಜಯರಾಮ್ ಶೆಟ್ಟಿ ಹೆನ್ನಾಬೈಲ್, ಪ್ರಕಾಶ್ ಶೆಟ್ಟಿ ಎಡಮೊಗೆ ಹಾಗೂ ಸ್ನೇಹಿತರು ಆಯೋಜಿಸಿದ್ದಾರೆ. ಪರಮಪೂಜ್ಯ ಶ್ರೀ ಶ್ರೀ ಸುಬುದೇಂದ್ರ ತೀರ್ಥರ ಆಶೀರ್ವಾದ ಹಾಗೂ ಅನುಗ್ರಹದೊಂದಿಗೆ ಈ ವಿಶೇಷ ಸೇವೆ […]









