ರವೀಂದ್ರ ಕಲಾಕ್ಷೇತ್ರದಲ್ಲಿ ಅಪರೂಪದ ಪೂರ್ಣರಾತ್ರಿ ತಾಳಮದ್ದಳೆ; ಜುಲೈ 25ರಂದು ನಾಗರಾಜ್ ಶೆಟ್ಟಿ ನೈಕಂಬ್ಳಿ ಸಂಯೋಜನೆಯ ‘ಯಕ್ಷಸಂಕ್ರಾಂತಿ’
ಬೆಂಗಳೂರು: ಇಂದಿನ ವೇಗದ ಜೀವನಶೈಲಿಯಲ್ಲಿ ಅಪರೂಪವಾಗುತ್ತಿರುವ ಪೂರ್ಣರಾತ್ರಿ ತಾಳಮದ್ದಳೆಗೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರ ಸಾಕ್ಷಿಯಾಗಲಿದ್ದು, ಯಕ್ಷಗಾನಾಭಿಮಾನಿಗಳಿಗೆ ವಿಶಿಷ್ಟ ಶ್ರವಣಾನುಭವ ನೀಡಲಿದೆ. ನಾಗರಾಜ್ ಶೆಟ್ಟಿ ನೈಕಂಬ್ಳಿ ಅವರ ಸಂಯೋಜನೆಯಲ್ಲಿ ಹಾಗೂ ಬ್ರಾಹ್ಮಿ ಕ್ಯಾಟರರ್ಸ್ ಪ್ರಸ್ತುತಿಯಲ್ಲಿ ನಡೆಯುತ್ತಿರುವ ‘ಯಕ್ಷಸಂಕ್ರಾಂತಿ’ ಕಾರ್ಯಕ್ರಮದ ಮೂರನೇ ವರ್ಷದ ಸಂಭ್ರಮ ಜುಲೈ 25ರಂದು ಶನಿವಾರ ರಾತ್ರಿ 10 ಗಂಟೆಯಿಂದ ಪ್ರಾರಂಭವಾಗಿ ಬೆಳಗಿನವರೆಗೆ ನಡೆಯಲಿದೆ. ಇತ್ತೀಚಿನ ದಿನಗಳಲ್ಲಿ ಸಮಯದ ಮಿತಿಯೊಳಗೆ ನಡೆಯುವ ತಾಳಮದ್ದಳೆಗಳ ನಡುವೆ, ಇಡೀ ರಾತ್ರಿ ನಡೆಯುವ ಅರ್ಥವೈಭವವನ್ನು ಕಲಾರಸಿಕರಿಗೆ ಪರಿಚಯಿಸುತ್ತಿರುವ ‘ಯಕ್ಷಸಂಕ್ರಾಂತಿ’ ಈಗಾಗಲೇ ತನ್ನದೇ […]









