KCET Results Students of Sujnan Educational Trust Kundapur achieve excellent results at the state level

ಕೆ.ಸಿ.ಇ.ಟಿ ಫಲಿತಾಂಶ: ಕುಂದಾಪುರದ ಸುಜ್ಞಾನ ಎಜುಕೇಶನಲ್‌ ಟ್ರಸ್ಟ್‌ ನ ವಿದ್ಯಾರ್ಥಿಗಳಿಂದ ರಾಜ್ಯಮಟ್ಟದಲ್ಲಿ ಶ್ರೇಷ್ಠ ಸಾಧನೆ

ಕುಂದಾಪುರ: ಇತ್ತೀಚೆಗೆ ಪ್ರಕಟಗೊಂಡ ರಾಜ್ಯಮಟ್ಟದ ಕೆ.ಸಿ.ಇ.ಟಿ (KCET) ಪರೀಕ್ಷೆಯಲ್ಲಿ ಕುಂದಾಪುರದ ಸುಜ್ಞಾನ ಎಜುಕೇಶನಲ್‌ ಟ್ರಸ್ಟ್‌ ನ ವಿದ್ಯಾರ್ಥಿಗಳು ಅತ್ಯುತ್ತಮ ರ‍್ಯಾಂಕ್‌ಗಳನ್ನು ಪಡೆಯುವ ಮೂಲಕ ಸಂಸ್ಥೆಗೆ ಹಾಗೂ ತಾಲ್ಲೂಕಿಗೆ ಕೀರ್ತಿ ತಂದಿದ್ದಾರೆ.

ಏಪ್ರಿಲ್ 23 ಮತ್ತು 24 ರಂದು ನಡೆದ ಇಂಜಿನಿಯರಿಂಗ್, ಕೃಷಿ ವಿಜ್ಞಾನ, ಪಶು ವೈದ್ಯಕೀಯ ಸೇರಿದಂತೆ ಹಲವು ಪ್ರಮುಖ ವೃತ್ತಿಪರ ಕೋರ್ಸ್‌ಗಳ ಪ್ರವೇಶಾತಿಗಾಗಿ ನಡೆದ ರಾಜ್ಯಮಟ್ಟದ ಸಿಇಟಿ ಪರೀಕ್ಷೆಯಲ್ಲಿ ಸುಜ್ಞಾನ ಪಿಯು ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಸುಜ್ಞಾನ ನೀಟ್‌ ಅಕಾಡೆಮಿಯ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡಿದ್ದಾರೆ.

ಧನುಷ್‌ ದೇವಾಡಿಗ(ಎನ್‌ ಎಲ್‌ ಟಿ) ರಾಜ್ಯಮಟ್ಟದಲ್ಲಿ 391ನೇ ರ‍್ಯಾಂಕ್, ಇಂಚರಾ, 616ನೇ ರ‍್ಯಾಂಕ್, ಸಮ್ಮೆದ ಪಾರೀಸ್‌ 888ನೇ ರ‍್ಯಾಂಕ್, ಪ್ರಿಯಾಂಕ ಶೆಟ್ಟಿ 2680ನೇ ರ‍್ಯಾಂಕ್ ಸೃಷ್ಟಿ ಶಿವಾಜಿ 3345ನೇ ರ‍್ಯಾಂಕ್, ಸಿಂಚನಾ 4731ನೇ, ಪೃಥ್ವಿಕ್‌ ಶೆಟ್ಟಿ 5384, ರಜತ್‌ ಅಡಿಗ 5389ನೇ, ಕೌಶಿಕ್‌ ಶೆಟ್ಟಿ 6093, ಜಯರಾಜ್‌ ಜೆ.ಎಸ್‌ 6166 ಎಂಬ ವಿದ್ಯಾರ್ಥಿಗಳು ಹತ್ತು ಸಾವಿರ ಒಳಗಡೆ Rank ಗಳಿಸಿ ಸಾಧನೆ ಮೆರೆದಿದ್ದಾರೆ.

Also Read: ‘ಕೊಲ್ಲೂರು ಒಂದು ಸಾಂಸ್ಕೃತಿಕ ಅಧ್ಯಯನ’ ಮಹಾಪ್ರಬಂಧಕ್ಕೆ ಸುಖಾನಂದ ಶೆಟ್ಟಿಯವರಿಗೆ ಡಾಕ್ಟರೇಟ್.

ಸುಜ್ಞಾನ ಪಿಯು ಕಾಲೇಜು ತನ್ನ ಶೈಕ್ಷಣಿಕ ಪಯಣದ ಮೊದಲ ವರ್ಷದಲ್ಲೇ ಹೆಮ್ಮೆಯ ಇತಿಹಾಸ ನಿರ್ಮಿಸಿದೆ. ಇತ್ತೀಚೆಗಷ್ಟೇ ಪ್ರಕಟವಾದ 2025-26ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶದಲ್ಲಿ ಕಾಲೇಜಿನ ಪ್ರಥಮ ಬ್ಯಾಚ್‌ನ ವಿದ್ಯಾರ್ಥಿಗಳು ಶೇ. 100ರಷ್ಟು ಅತ್ಯುತ್ತಮ ಫಲಿತಾಂಶ ದಾಖಲಿಸಿ ರಾಜ್ಯಮಟ್ಟದಲ್ಲಿ 2 Rank ಗಳಿಸಿದ್ದಾರೆ. ಹಾಗೇ 125 ವಿದ್ಯಾರ್ಥಿಗಳಲ್ಲಿ 91 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ನಲ್ಲಿ ಪಾಸಾಗಿ ಕಾಲೇಜಿನ ಯಶಸ್ಸಿನ ಪತಾಕೆಯನ್ನು ಹಾರಿಸಿದ್ದಾರೆ. ಇದೀಗ ಸಿಇಟಿ ಪರೀಕ್ಷೆಯಲ್ಲೂ ಅಗ್ರ ರ‍್ಯಾಂಕ್‌ಗಳನ್ನು ಬಾಚಿಕೊಳ್ಳುವ ಮೂಲಕ ಕಾಲೇಜಿನ ಶೈಕ್ಷಣಿಕ ಗುಣಮಟ್ಟವನ್ನು ಸಾಬೀತುಪಡಿಸಿದ್ದಾರೆ.

ಸುಜ್ಞಾನ ಎಜುಕೇಶನಲ್‌ ಟ್ರಸ್ಟ್‌ ನ ಆಡಳಿತಕ್ಕೆ ಒಳಪಡುವ ಸುಜ್ಞಾನ ಪಿಯು ಕಾಲೇಜು ಕುಂದಾಪುರ ಹಾಗೂ ಸುಜ್ಞಾನ NEET ಅಕಾಡೆಮಿ ಕುಂದಾಪುರ ಇದರ ಮೂಲಕ ವಿದ್ಯಾರ್ಥಿಗಳಿಗೆ ದೇಶದ ನಾನಾ ಭಾಗದ ಪರಿಣಿತ ತರಬೇತುದಾರರ ಮೂಲಕ ತರಬೇತಿ ನೀಡಿ ಅವರನ್ನು CET, NEET,JEE ಪರೀಕ್ಷೆಗಳಿಗೆ ಸನ್ನದ್ದುಗೊಳಿಸಲಾಯಿತು. ವಿದ್ಯಾರ್ಥಿಗಳ ಈ ಸಾಧನೆಗೆ ಸುಜ್ಞಾನ ಎಜುಕೇಶನಲ್‌ ಟ್ರಸ್ಟ್‌ನ ಅಧ್ಯಕ್ಷರಾದ ಡಾ.ರಮೇಶ್‌ ಶೆಟ್ಟಿ, ಕಾರ್ಯದರ್ಶಿ ಪ್ರತಾಪ್‌ ಶೆಟ್ಟಿ, ಖಜಾಂಚಿ ಭರತ್‌ ಶೆಟ್ಟಿ ಹರ್ಷ ವ್ಯಕ್ತಪಡಿಸಿದರು.

ರಾಜ್ಯಮಟ್ಟದಲ್ಲಿ ಅತ್ಯುತ್ತಮ ರ‍್ಯಾಂಕ್ ಗಳಿಸಿ ಕಾಲೇಜಿಗೆ ಕೀರ್ತಿ ತಂದ ಸಾಧಕ ವಿದ್ಯಾರ್ಥಿಗಳನ್ನು ಸುಜ್ಞಾನ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ, ಪ್ರಾಂಶುಪಾಲರು, ಬೋಧಕ ಹಾಗೂ ಬೋಧಕೇತರ ವೃಂದದವರು ಹೃತ್ಪೂರ್ವಕವಾಗಿ ಅಭಿನಂದಿಸಿ, ಅವರ ಮುಂದಿನ ಉನ್ನತ ಶಿಕ್ಷಣದ ಹಾದಿಗೆ ಶುಭ ಹಾರೈಸಿದ್ದಾರೆ.

KCET Results Students of Sujnan Educational Trust Kundapur achieve excellent results at the state level

Leave a Comment

Your email address will not be published. Required fields are marked *

Scroll to Top