2025-26ನೇ ಸಾಲಿನ ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ (CET) ಫಲಿತಾಂಶ ಪ್ರಕಟಗೊಂಡಿದ್ದು, ಈ ಪರೀಕ್ಷೆಯಲ್ಲಿ ಬಾರ್ಕೂರಿನ ಪ್ರತಿಭಾವಂತ ವಿದ್ಯಾರ್ಥಿ ಸಾರ್ಥಕ್ ಆರ್. ಶೆಟ್ಟಿ ಅವರು ರಾಜ್ಯ ಮಟ್ಟದಲ್ಲಿ 26ನೇ ರ್ಯಾಂಕ್ ಪಡೆದು ಗಮನಾರ್ಹ ಸಾಧನೆ ಮಾಡಿದ್ದಾರೆ.
ಸಾರ್ಥಕ್ ಅವರು ಬಾರ್ಕೂರಿನ ಶಿಕ್ಷಕ ದಂಪತಿಗಳಾದ ಶ್ರೀಮತಿ ವನಜ ಶೆಟ್ಟಿ ಹಾಗೂ ಶ್ರೀ ಹಿಮಕರ ಶೆಟ್ಟಿ ಅವರ ಮೊಮ್ಮಗರಾಗಿದ್ದು, ಶ್ರೀಮತಿ ದೀಪ್ತಿ ಆರ್. ಶೆಟ್ಟಿ ಮತ್ತು ಶ್ರೀರಾಮಕೃಷ್ಣ ಶೆಟ್ಟಿ ಅವರ ಪುತ್ರ ಹಾಗೂ ದೀಪಕ್ ಶೆಟ್ಟಿ ಅವರ ಅಳಿಯರಾಗಿದ್ದಾರೆ.
ಸಿಇಟಿ ಪರೀಕ್ಷೆಯಲ್ಲಿ ಸಾವಿರಾರು ವಿದ್ಯಾರ್ಥಿಗಳ ಮಧ್ಯೆ 26ನೇ ರ್ಯಾಂಕ್ ಪಡೆಯುವುದು ಅತ್ಯಂತ ಹೆಮ್ಮೆಯ ಸಾಧನೆಯಾಗಿದ್ದು, ಸಾರ್ಥಕ್ ಅವರ ಪರಿಶ್ರಮ, ಶಿಸ್ತುಬದ್ಧ ಅಧ್ಯಯನ ಮತ್ತು ಪೋಷಕರ ಮಾರ್ಗದರ್ಶನಕ್ಕೆ ಈ ಯಶಸ್ಸು ಸಾಕ್ಷಿಯಾಗಿದೆ.
Unprecedented achievement of a student from Barkur in the 2025-26 CET exam


