Election of new office bearers of Hubli-Dharwad Buntara Sangha for the year 2026-28

ಹುಬ್ಬಳ್ಳಿ-ಧಾರವಾಡ ಬಂಟರ ಸಂಘದ 2026-28 ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ

ಹುಬ್ಬಳ್ಳಿ-ಧಾರವಾಡ ಬಂಟರ ಸಂಘದ 2026-28 ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಯಶಸ್ವಿಯಾಗಿ ಪೂರ್ಣಗೊಂಡಿದ್ದು, ಸಂಘದ ನೂತನ ಅಧ್ಯಕ್ಷರಾಗಿ ರಾಜೇಂದ್ರ ವಿ. ಶೆಟ್ಟಿ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.

ಮೇ 28 ರಂದು ಸಂಘದ ಸಭಾಂಗಣದಲ್ಲಿ ಹಾಲಿ ಅಧ್ಯಕ್ಷ ವಿಜಯಾನಂದ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆದ ಪ್ರಥಮ ಕಾರ್ಯಕಾರಿ ಸಮಿತಿ ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಸಭೆಯಲ್ಲಿ ಉಪಾಧ್ಯಕ್ಷರಾಗಿ ಸುಧೀರ್ ಜೆ. ಶೆಟ್ಟಿ ಹಾಗೂ ಶ್ರೀನಿವಾಸ ಶೆಟ್ಟಿ (ಧಾರವಾಡ), ಕಾರ್ಯದರ್ಶಿಯಾಗಿ ರತ್ನಾಕರ್ ಎಂ. ಶೆಟ್ಟಿ (ಕರಾವಳಿ ಕ್ಯಾಟರ್ಸ್), ಖಜಾಂಚಿಯಾಗಿ ದಿನೇಶ್ ಕೆ. ಶೆಟ್ಟಿ (ಗ್ಲೋಬಲ್ ಮೀಡಿಯಾ) ಮತ್ತು ಜೊತೆ ಕಾರ್ಯದರ್ಶಿಯಾಗಿ ಜ್ಯೋತಿ ಆರ್.ಟಿ. ಶೆಟ್ಟಿ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

Also Read: ಕೆ.ಸಿ.ಇ.ಟಿ ಫಲಿತಾಂಶ: ಕುಂದಾಪುರದ ಸುಜ್ಞಾನ ಎಜುಕೇಶನಲ್‌ ಟ್ರಸ್ಟ್‌ ನ ವಿದ್ಯಾರ್ಥಿಗಳಿಂದ ರಾಜ್ಯಮಟ್ಟದಲ್ಲಿ ಶ್ರೇಷ್ಠ ಸಾಧನೆ

ಉಳಿದ ಪದಾಧಿಕಾರಿಗಳು ಹಾಗೂ ವಿವಿಧ ಸಮಿತಿಗಳ ಸದಸ್ಯರ ನೇಮಕಾತಿಯ ಜವಾಬ್ದಾರಿಯನ್ನು ನೂತನ ಅಧ್ಯಕ್ಷ ರಾಜೇಂದ್ರ ವಿ. ಶೆಟ್ಟಿ ಅವರಿಗೆ ವಹಿಸಲಾಗಿದೆ ಎಂದು ನಿಕಟ ಪೂರ್ವ ಅಧ್ಯಕ್ಷರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನೂತನ ಪದಾಧಿಕಾರಿಗಳ ಆಯ್ಕೆಯೊಂದಿಗೆ ಸಂಘದ ಮುಂದಿನ ಎರಡು ವರ್ಷಗಳ ಕಾರ್ಯಚಟುವಟಿಕೆಗಳಿಗೆ ಹೊಸ ಚೈತನ್ಯ ದೊರಕಿದ್ದು, ಸಮಾಜಮುಖಿ ಹಾಗೂ ಅಭಿವೃದ್ಧಿ ಕಾರ್ಯಕ್ರಮಗಳನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ವಿಶ್ವಾಸ ವ್ಯಕ್ತವಾಗಿದೆ.

Election of new office bearers of Hubli-Dharwad Bunts Sangha for the year 2026-28

Leave a Comment

Your email address will not be published. Required fields are marked *

Scroll to Top