ಸುದ್ದಿ

Your blog category

Molahalli dinesh hegde jayarathna trust scholarship programme

ಮೊಳಹಳ್ಳಿ ದಿನೇಶ್ ಹೆಗ್ಡೆ ಜಯರತ್ನ ಟ್ರಸ್ಟ್‌ನಿಂದ ವಿದ್ಯಾರ್ಥಿವೇತನ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮ

ಕುಂದಾಪುರ: ಮೊಳಹಳ್ಳಿ ದಿನೇಶ್ ಹೆಗ್ಡೆ ಜಯರತ್ನ ಟ್ರಸ್ಟ್ (ರಿ) ಮೊಳಹಳ್ಳಿ ವತಿಯಿಂದ ರಾಜ್ಯಮಟ್ಟದಲ್ಲಿ ಶೈಕ್ಷಣಿಕ ಸಾಧನೆಗೈದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ರಾಜ್ಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ ಕ್ರೀಡಾಪಟುಗಳಿಗೆ ಗೌರವ ಸನ್ಮಾನ, ಮೊಳಹಳ್ಳಿ ಗ್ರಾಮದ ವಿಶಿಷ್ಟ ಶೈಕ್ಷಣಿಕ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಣೆ ಹಾಗೂ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ನೋಟ್‌ಬುಕ್ ವಿತರಣಾ ಕಾರ್ಯಕ್ರಮವು ಬಿದ್ಕಲ್‌ಕಟ್ಟೆಯ ಕರ್ನಾಟಕ ಪಬ್ಲಿಕ್ ಸ್ಕೂಲ್ (ಪ್ರೌಢಶಾಲಾ ವಿಭಾಗ)ದಲ್ಲಿ ವಿಜೃಂಭಣೆಯಿಂದ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಟ್ರಸ್ಟ್‌ನ ಸಂಸ್ಥಾಪಕ ಮೊಳಹಳ್ಳಿ ದಿನೇಶ್ ಹೆಗ್ಡೆ ವಹಿಸಿದ್ದರು. […]

Election of new office bearers of Hubli-Dharwad Buntara Sangha for the year 2026-28

ಹುಬ್ಬಳ್ಳಿ-ಧಾರವಾಡ ಬಂಟರ ಸಂಘದ 2026-28 ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ

ಹುಬ್ಬಳ್ಳಿ-ಧಾರವಾಡ ಬಂಟರ ಸಂಘದ 2026-28 ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಯಶಸ್ವಿಯಾಗಿ ಪೂರ್ಣಗೊಂಡಿದ್ದು, ಸಂಘದ ನೂತನ ಅಧ್ಯಕ್ಷರಾಗಿ ರಾಜೇಂದ್ರ ವಿ. ಶೆಟ್ಟಿ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ. ಮೇ 28 ರಂದು ಸಂಘದ ಸಭಾಂಗಣದಲ್ಲಿ ಹಾಲಿ ಅಧ್ಯಕ್ಷ ವಿಜಯಾನಂದ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆದ ಪ್ರಥಮ ಕಾರ್ಯಕಾರಿ ಸಮಿತಿ ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಸಭೆಯಲ್ಲಿ ಉಪಾಧ್ಯಕ್ಷರಾಗಿ ಸುಧೀರ್ ಜೆ. ಶೆಟ್ಟಿ ಹಾಗೂ ಶ್ರೀನಿವಾಸ ಶೆಟ್ಟಿ (ಧಾರವಾಡ), ಕಾರ್ಯದರ್ಶಿಯಾಗಿ ರತ್ನಾಕರ್ ಎಂ. ಶೆಟ್ಟಿ (ಕರಾವಳಿ ಕ್ಯಾಟರ್ಸ್),

Congratulations to Rajendra V Shetty – Honored by the Advisory Committee of Hubli-Dharwad Bunts Sangha

ರಾಜೇಂದ್ರ ವಿ. ಶೆಟ್ಟಿ ಅವರಿಗೆ ಅಭಿನಂದನೆಗಳ ಮಹಾಪೂರ – ಹುಬ್ಬಳ್ಳಿ-ಧಾರವಾಡ ಬಂಟರ ಸಂಘದ ಸಲಹಾ ಸಮಿತಿಯಿಂದ ಗೌರವ

ಹುಬ್ಬಳ್ಳಿ-ಧಾರವಾಡ ಬಂಟರ ಸಂಘದಲ್ಲಿ ಜೂನ್ 6ರಂದು ನಡೆದ ಪದಾಧಿಕಾರಿಗಳ ಹಾಗೂ ಸಲಹಾ ಸಮಿತಿ ಸಭೆಯಲ್ಲಿ ಸಂಘದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ರಾಜೇಂದ್ರ ವಿ. ಶೆಟ್ಟಿಯವರನ್ನು ಸಲಹಾ ಸಮಿತಿಯ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಸಲಹಾ ಸಮಿತಿಯ ಸದಸ್ಯರು, ರಾಜೇಂದ್ರ ವಿ. ಶೆಟ್ಟಿಯವರ ನಾಯಕತ್ವದಲ್ಲಿ ಸಂಘವು ಮತ್ತಷ್ಟು ಅಭಿವೃದ್ಧಿಯ ಪಥದಲ್ಲಿ ಸಾಗಲಿ ಹಾಗೂ ಸಮಾಜ ಸೇವೆಯ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲುಗಳನ್ನು ಸಾಧಿಸಲಿ ಎಂದು ಶುಭ ಹಾರೈಸಿದರು. ಸಂಘದ ಸಾಂಸ್ಕೃತಿಕ, ಶೈಕ್ಷಣಿಕ ಮತ್ತು ಸಾಮಾಜಿಕ ಚಟುವಟಿಕೆಗಳು ಇನ್ನಷ್ಟು

Anna Prasadam Hotel A delicious journey on the highway

ಅನ್ನ ಪ್ರಸಾದಂ: ಹೆದ್ದಾರಿಯಲ್ಲೊಂದು ರುಚಿಯಾದ ಪಯಣ

ಹಾಸನ : ಕರಾವಳಿ ಭಾಗದಿಂದ ಬೆಂಗಳೂರಿಗೆ ಪ್ರಯಾಣಿಸುವ ಪ್ರಯಾಣಿಕರಿಗೊಂದು ಗುಡ್‌ನ್ಯೂಸ್‌ ಇಲ್ಲಿದೆ. ನೆಲಮಂಗಲದಿಂದ ಹಾಸನಕ್ಕೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿಯ ಚೆನ್ನರಾಯಪಟ್ಟಣದಲ್ಲಿ ರವಿತೇಜ್‌ ಶೆಟ್ಟಿ ಮಾರಣಕಟ್ಟೆ ಯವರ ಮಾಲೀಕತ್ವದ “ಅನ್ನ ಪ್ರಸಾದಂ” ಮಲ್ಟಿ ಕ್ಯುಸಿನ್ ಫ್ಯಾಮಿಲಿ ವೆಜ್ ರೆಸ್ಟೋರೆಂಟ್ ಶುಭಾರಂಭಗೊಂಡಿದ್ದು, ರುಚಿಯಿಂದಲೇ ಗ್ರಾಹಕರನ್ನು ತನ್ನತ್ತ ಸೆಳೆಯುತ್ತಿದೆ. ಚೆನ್ನರಾಯಪಟ್ಟಣದ ಬರ್ಗೂರು ಹ್ಯಾಂಡ್ ಪೋಸ್ಟ್ ಬಳಿಯಲ್ಲಿರುವ ಅನ್ನ ಪ್ರಸಾದಂ ಹೋಟೆಲ್, ಕೇವಲ ಹಸಿವು ನೀಗಿಸುವ ಜಾಗವಷ್ಟೇ ಅಲ್ಲಾ, ಅದೊಂದು ಶುದ್ಧ ಸಸ್ಯಾಹಾರಿ ರುಚಿಯ ಸ್ವರ್ಗವಾಗಿತ್ತು. ಹೋಟೆಲ್ ಪ್ರವೇಶಿಸುತ್ತಿದ್ದಂತೆ “ನಂದಿನಿ ತುಪ್ಪದ

Buntara Sangha Bangalore Election - Kanti Shetty to contest against Dr Deepak Shetty

ಬಂಟರ ಸಂಘ ಬೆಂಗಳೂರು ಚುನಾವಣೆ – ಡಾ. ದೀಪಕ್ ಶೆಟ್ಟರ ವಿರುದ್ಧ ಕಾಂತಿ ಶೆಟ್ಟಿ ಕಣಕ್ಕೆ?

ಬೆಂಗಳೂರು: ರಾಜ್ಯದ ಪ್ರತಿಷ್ಠಿತ ಸಮುದಾಯ ಸಂಸ್ಥೆಗಳಲ್ಲಿ ಒಂದಾದ ಬೆಂಗಳೂರು ಬಂಟರ ಸಂಘವು ಸಾಂಸ್ಕೃತಿಕ, ಶೈಕ್ಷಣಿಕ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ಮಹತ್ವದ ಸೇವೆ ಸಲ್ಲಿಸುತ್ತಿದ್ದು, ಸಮಾಜದ ಏಳಿಗೆಗಾಗಿ ಹಲವಾರು ಜನಪರ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದೆ. ಸಂಘದ ಪ್ರಸ್ತುತ ಆಡಳಿತ ಮಂಡಳಿಯ ಅವಧಿ ಮುಕ್ತಾಯಗೊಳ್ಳಲಿದ್ದು, 2026-28ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆಗಾಗಿ ಶೀಘ್ರದಲ್ಲೇ ಚುನಾವಣೆ ನಡೆಯಲಿರುವುದು ಸಂಘದ ಸದಸ್ಯರ ಗಮನ ಸೆಳೆದಿದೆ. ಈ ಬಾರಿಯ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕಾಗಿ ಹಲವು ಘಟಾನುಘಟಿಗಳು ತೆರೆಮರೆಯಲ್ಲಿ ಪ್ರಯತ್ನ ನಡೆಸುತ್ತಿರುವುದು ತಿಳಿದುಬಂದಿದೆ. ಈಗಾಗಲೇ

Bunts sangha banglore yaksha sambhrama programme

ಬಂಟರ ಸಂಘ ಬೆಂಗಳೂರಿನಲ್ಲಿ ‘ಯಕ್ಷ ಸಂಭ್ರಮ’ – ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಪ್ರದರ್ಶನ ಇಂದು

ಬೆಂಗಳೂರು: ಬಂಟರ ಸಂಘ ಬೆಂಗಳೂರು ಹಾಗೂ ಯಕ್ಷಗಾನ ಮತ್ತು ರಂಗ ತರಬೇತಿ ಸಮಿತಿಯ ಸಂಯುಕ್ತ ಆಶ್ರಯದಲ್ಲಿ “ಯಕ್ಷ ಸಂಭ್ರಮ” ಕಾರ್ಯಕ್ರಮದ ಅಂಗವಾಗಿ ತೆಂಕು-ಬಡಗಿನ ಅದ್ದೂರಿ ಯಕ್ಷಗಾನ “ಶ್ರೀ ದೇವಿ ಮಹಾತ್ಮೆ” ಇಂದು (ಜೂನ್ 06, ಶನಿವಾರ) ಮಧ್ಯಾಹ್ನ 3 ಗಂಟೆಯಿಂದ ವಿಜಯನಗರದ ಬಂಟರ ಸಂಘದ ಸಭಾಂಗಣದಲ್ಲಿ ನಡೆಯಲಿದೆ. ಈ ವಿಶೇಷ ಯಕ್ಷಗಾನ ಪ್ರದರ್ಶನದಲ್ಲಿ ಖ್ಯಾತ ಕಲಾವಿದರಾದ ಜನ್ಸಾಲೆ, ಸುರೇಶ ಶೆಟ್ಟಿ, ಕಾವ್ಯಶ್ರೀ, ಪೆರ್ಮುದೆ, ಐರಬೈಲ್, ಯಳಬೇರು, ಬಡಬಾಳ್, ಹಕ್ಲಾಡಿ, ನಿತೀನ್, ಪೆರ್ಲ ಹಾಗೂ ಗಜಗಟ್ಟಿ ಸೇರಿದಂತೆ ಹಲವು

Doctorate to Sukhananda Shetty for his thesis Kollur as a Cultural Study

‘ಕೊಲ್ಲೂರು ಒಂದು ಸಾಂಸ್ಕೃತಿಕ ಅಧ್ಯಯನ’ ಮಹಾಪ್ರಬಂಧಕ್ಕೆ ಸುಖಾನಂದ ಶೆಟ್ಟಿಯವರಿಗೆ ಡಾಕ್ಟರೇಟ್.

ಕುಂದಾಪುರ: ಕುಂದಾಪುರದ ಪ್ರತಿಷ್ಠಿತ ಭಂಡಾರ್‌ಕಾರ್ಸ್‌ ಕಾಲೇಜಿನ ಕನ್ನಡ ವಿಭಾಗದ ಸಹ ಪ್ರಾಧ್ಯಾಪಕರಾದ ಸುಖಾನಂದ ಶೆಟ್ಟಿ ಅಂಪಾರು ಅವರು ಸಲ್ಲಿಸಿದ ‘ಕೊಲ್ಲೂರು ಒಂದು ಸಾಂಸ್ಕೃತಿಕ ಅಧ್ಯಯನ’ (A Cultural Study in Kolluru) ಮಹಾಪ್ರಬಂಧಕ್ಕೆ ಪ್ರತಿಷ್ಠಿತ ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (MAHE) ವಿಶ್ವವಿದ್ಯಾಲಯವು ಡಾಕ್ಟರೇಟ್ ಪದವಿಯನ್ನು ನೀಡಿ ಗೌರವಿಸಿದೆ. ಹೆಸರಾಂತ ಲೇಖಕಿ ಹಾಗೂ ವಿಶ್ರಾಂತ ಪ್ರಾಧ್ಯಾಪಕರಾದ ಡಾ. ರೇಖಾ ಬನ್ನಾಡಿಯವರ ಮಾರ್ಗದರ್ಶನದಲ್ಲಿ, ಮಾಹೆಯ ಪ್ರಾದೇಶಿಕ ಜಾನಪದ ರಂಗಕಲೆಗಳ ಅಧ್ಯಯನ ಕೇಂದ್ರದ ಮೂಲಕ ಶ್ರೀಯುತರು ಈ ಸಂಶೋಧನಾ

Bangalore Bunts Sanghas social service work Free sewing machines for 46 people

ಬೆಂಗಳೂರು ಬಂಟರ ಸಂಘದ ಸಮಾಜಸೇವಾ ಕಾರ್ಯ: 46 ಮಂದಿಗೆ ಉಚಿತ ಹೊಲಿಗೆ ಯಂತ್ರ

ಬೆಂಗಳೂರು ಬಂಟರ ಸಂಘದ ಸಮಾಜ ಸೇವಾ ಸಮಿತಿ ಹಾಗೂ ಸೇವಾದಳದ ವತಿಯಿಂದ ಆಯೋಜಿಸಲಾದ “ಸೇವಾ ಸಮಾಗಮ” ಕಾರ್ಯಕ್ರಮದಲ್ಲಿ ಸುಮಾರು 46 ಫಲಾನುಭವಿಗಳಿಗೆ ಉಚಿತ ಹೊಲಿಗೆ ಯಂತ್ರಗಳನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಮಾತನಾಡಿದ ಗಣ್ಯರು, ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಹಾಗೂ ಆರ್ಥಿಕವಾಗಿ ಸಬಲರಾಗಲು ಇಂತಹ ಸಮಾಜಮುಖಿ ಯೋಜನೆಗಳು ಸಹಕಾರಿಯಾಗುತ್ತವೆ ಎಂದು ಅಭಿಪ್ರಾಯಪಟ್ಟರು. ಸಮಾಜದ ಅಗತ್ಯವಿರುವ ವರ್ಗಗಳಿಗೆ ನೆರವು ನೀಡುವ ಉದ್ದೇಶದಿಂದ ಬೆಂಗಳೂರು ಬಂಟರ ಸಂಘವು ನಿರಂತರವಾಗಿ ವಿವಿಧ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ ಎಂದು ತಿಳಿಸಿದರು. Also Read: ದಿ. ಕಾಶಿ

Free uniforms distributed to 60 students of Devanari Bangadi School in memory of Kashi Shetty

ದಿ. ಕಾಶಿ ಶೆಟ್ಟಿ ಸ್ಮರಣಾರ್ಥ ದೇವನಾರಿ ಬಂಗಾಡಿ ಶಾಲೆಯ 60 ವಿದ್ಯಾರ್ಥಿಗಳಿಗೆ ಉಚಿತ ಯೂನಿಫಾರ್ಮ್ ವಿತರಣೆ

ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ, ಪ್ರಸಿದ್ಧ ಸಮಾಜಸೇವಕ ಹಾಗೂ ಉದ್ಯಮಿ ಬರೋಡ ಶಶಿಧರ್ ಶೆಟ್ಟಿ ಅವರ ವತಿಯಿಂದ ದೇವನಾರಿ ಬಂಗಾಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 60 ವಿದ್ಯಾರ್ಥಿಗಳಿಗೆ ಉಚಿತ ಯೂನಿಫಾರ್ಮ್ (ಟಿ-ಶರ್ಟ್ ಮತ್ತು ಪ್ಯಾಂಟ್) ವಿತರಿಸಲಾಯಿತು. ತಮ್ಮ ಪ್ರೀತಿಯ ತಾಯಿ ದಿವಂಗತ ಕಾಶಿ ಶೆಟ್ಟಿ ಅವರ ಸ್ಮರಣಾರ್ಥವಾಗಿ ಶಶಿಧರ್ ಶೆಟ್ಟಿ ಅವರು ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೆ ಈ ಯೂನಿಫಾರ್ಮ್‌ಗಳನ್ನು ದೇಣಿಗೆಯಾಗಿ ನೀಡಿದ್ದಾರೆ. ಉದ್ಯಮಿಯ ಈ ಸಮಾಜಮುಖಿ ಕಾರ್ಯವು ವಿದ್ಯಾರ್ಥಿಗಳಲ್ಲಿ ಹರ್ಷ ಮೂಡಿಸಿದೆ.

Scroll to Top