ಪುಣೆ: ಇಲ್ಲಿನ ಪ್ರಮುಖ ಸಾಮಾಜಿಕ ಸಂಸ್ಥೆಯಾದ ಪುಣೆ ಬಂಟರ ಸಂಘದ ಸಮಾಜ ಕಲ್ಯಾಣ, ಕಲ್ಪವೃಕ್ಷ ಹಾಗೂ ಕ್ರೀಡಾದಾತ ಯೋಜನೆಗಳ ಆಶ್ರಯದಲ್ಲಿ ಜೂನ್ 21 ರಂದು ಅಂತರರಾಷ್ಟ್ರೀಯ ಯೋಗ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿದೆ. ಅಂದು ಬೆಳಿಗ್ಗೆ 9:00 ಗಂಟೆಗೆ ಪುಣೆಯ ಬಂಟರ ಭವನದ ಬ್ಯಾಂಕ್ವೇಟ್ ಹಾಲ್ನಲ್ಲಿ ಈ ವಿಶೇಷ ಯೋಗ ಕಾರ್ಯಕ್ರಮ ನಡೆಯಲಿದೆ.
ಪ್ರಸಿದ್ಧ ಯೋಗ ತರಬೇತುದಾರೆ ಜ್ಯೋತಿ ಶೆಟ್ಟಿ ಅವರು ಯೋಗದಿಂದ ದೇಹ ಮತ್ತು ಮನಸ್ಸಿಗೆ ಆಗುವ ಪ್ರಯೋಜನಗಳ ಕುರಿತು ವಿಶೇಷ ಉಪನ್ಯಾಸ ನೀಡಲಿದ್ದಾರೆ. ಪುಣೆಯ ‘ಶೆಟ್ಟಿ ಯೋಗ ಕ್ಲಾಸ್’ನ ನಿರ್ದೇಶಕಿ ಪ್ರಮೀಳಾ ಜೆ. ಶೆಟ್ಟಿ ಅವರು ಯೋಗ ದಿನಾಚರಣೆಯ ಪ್ರಾಯೋಗಿಕ ಸೆಷನ್ ಅನ್ನು ನಡೆಸಿಕೊಡಲಿದ್ದಾರೆ. ಬಂಟರ ಸಂಘ ಪುಣೆಯ ಮಹಿಳಾ ವಿಭಾಗ, ಯುವ ವಿಭಾಗ ಹಾಗೂ ಎಲ್ಲಾ ಪ್ರಾದೇಶಿಕ ಸಮಿತಿಗಳ ಸಂಯುಕ್ತ ಆಶ್ರಯದಲ್ಲಿ ಈ ಕಾರ್ಯಕ್ರಮ ಮೂಡಿಬರಲಿದೆ.
“ಈ ಯೋಗ ಶಿಬಿರದಲ್ಲಿ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕಾಗಿ ಸಂಘದ ಗೌರವಾಧ್ಯಕ್ಷ ಸಂತೋಷ್ ಶೆಟ್ಟಿ ಇನ್ನ ಕುರ್ಕಿಲ್ ಬೆಟ್ಟುಬಾಳಿಕೆ, ಅಧ್ಯಕ್ಷ ಕೆ. ಅಜಿತ್ ಹೆಗ್ಡೆ, ಉಪಾಧ್ಯಕ್ಷರುಗಳಾದ ವಿಶ್ವನಾಥ್ ಶೆಟ್ಟಿ ಮತ್ತು ರಾಮಕೃಷ್ಣ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಸುಧೀರ್ ಶೆಟ್ಟಿ ಕಣಂಜಾರು, ಕೋಶಾಧಿಕಾರಿ ಪ್ರಶಾಂತ್ ಶೆಟ್ಟಿ, ಕ್ರೀಡಾ ವಿಭಾಗದ ಕಾರ್ಯಾಧ್ಯಕ್ಷ ವಿವೇಕಾನಂದ ಶೆಟ್ಟಿ ಅವರ್ಸೆ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶಮ್ಮಿ ಎ. ಹೆಗ್ಡೆ ಹಾಗೂ ಯುವವಿಭಾಗದ ಕಾರ್ಯಾಧ್ಯಕ್ಷ ಅಭಿನಂದನ್ ಶೆಟ್ಟಿ ಸೇರಿದಂತೆ ಸಮಿತಿಯ ಸಮಸ್ತ ಪದಾಧಿಕಾರಿಗಳು ವಿನಂತಿಸಿದ್ದಾರೆ.”


