Amarnath Shetty a symbol of transparent governance is the candidate for the post of Honorary Secretary of Heggunje

ಪಾರದರ್ಶಕ ಆಡಳಿತದ ಪ್ರತೀಕ ಅಮರನಾಥ್ ಶೆಟ್ಟಿ ಹೆಗ್ಗುಂಜೆ ಗೌರವ ಕಾರ್ಯದರ್ಶಿ ಅಭ್ಯರ್ಥಿ

ಗೌರವದ ವ್ಯಕ್ತಿತ್ವಕ್ಕೆ ಗೌರವ ಕಾರ್ಯದರ್ಶಿ ಹುದ್ದೆ. ಈ ಸಲದ ಬೆಂಗಳೂರು ಬಂಟರ ಸಂಘದ ಚುನಾವಣೆಯಲ್ಲಿ ಡಾ. ದೀಪಕ್ ಶೆಟ್ಟರ ಟೀಮ್‌ನಲ್ಲಿ ಗೌರವ ಕಾರ್ಯದರ್ಶಿ ಹುದ್ದೆಗೆ ಅಮರನಾಥ್ ಶೆಟ್ಟಿ ಹೆಗ್ಗುಂಜೆ ಅವರು ಸ್ಪರ್ಧಿಸುತ್ತಿದ್ದಾರೆ. ಅಮರನಾಥ್ ಶೆಟ್ಟರ ಬಗ್ಗೆ ವಿಶೇಷ ಪರಿಚಯ ಬೇಕಿಲ್ಲ ಯಾಕೆಂದರೆ ಹಿರಿಯರೊಂದಿಗೆ ಗೌರವದಿಂದ, ಕಿರಿಯರೊಂದಿಗೆ ಆತ್ಮೀಯತೆಯಿಂದ ಬೆರತು ಸುಪರಿಚಿತರಾಗಿದ್ದಾರೆ. ಕರಾವಳಿಯ ಸಂಘ ಸಂಸ್ಥೆಯ ಪೋಷಕ ಶಕ್ತಿ ಅಮರನಾಥ ಶೆಟ್ಟರು, ನೂರಾರು ಜನರ ಸಂಕಷ್ಟಕ್ಕೆ ಸ್ಪಂದಿಸಿದವರು. ಯಾರನ್ನೂ ನೋಯಿಸದ, ಎಲ್ಲರ ಸಂತೋಷ ಮತ್ತು ಸಂಕಷ್ಟಕ್ಕೆ ಸದಾ ಸ್ಪಂದಿಸುವ ಸರಳ, ಸೌಜನ್ಯಯುತ, ಅಮರನಾಥ ಶೆಟ್ಟರ ನಮ್ಮ ಬಂಟ ಸಮುದಾಯದ ಹೆಮ್ಮೆ.

  • 2014–16 : ಸಮಾಜ ಸೇವಾ ಸಮಿತಿಯ ಅಧ್ಯಕ್ಷರು
  • 2016–18 : ಕಾರ್ಯಕಾರಿ ಸಮಿತಿ ಸದಸ್ಯರು
  • 2022–24 : ಖಜಾಂಚಿಯಾಗಿ ಯಶಸ್ವಿ ಸೇವೆ

Also Read: ಶೈಕ್ಷಣಿಕ ಕ್ರಾಂತಿಯ ಹರಿಕಾರ: ಪ್ರೊ| ಡಾ| ಕೊತ್ತಾಡಿ ಉಮೇಶ್ ಶೆಟ್ಟಿ ಅವರ ಸಾಧನೆಯ ಪಥ

ಅಮರನಾಥ ಶೆಟ್ಟರು ಖಜಾಂಚಿಯಾಗಿ ಕಾರ್ಯನಿರ್ವಹಿಸಿದ ಅವಧಿಯಲ್ಲಿ ಬಂಟರ ಸಂಘದ ಲೆಕ್ಕಪತ್ರ ವ್ಯವಸ್ಥೆಯನ್ನು ಆಧುನೀಕರಿಸಿ, ಸಂಘದ ಇತಿಹಾಸದಲ್ಲೇ ಮೊದಲ ಬಾರಿಗೆ ಸಂಪೂರ್ಣ ನಗದುರಹಿತ (Cashless) ವ್ಯವಹಾರ ವ್ಯವಸ್ಥೆಯನ್ನು ಜಾರಿಗೆ ತಂದವರು‌. ಪ್ರಾಮಾಣಿಕತೆ, ಪಾರದರ್ಶಕತೆ, ನಿಷ್ಪಕ್ಷಪಾತ ಆಡಳಿತ ಹಾಗೂ ಸದಸ್ಯರ ನೋವು-ನಲಿವುಗಳಿಗೆ ಸ್ಪಂದಿಸುವ ಸೇವಾಮನೋಭಾವ ಅವರ ಗುರುತು.

ಬಂಟರ ಸಂಘದ ಮತ್ತಷ್ಟು ಅಭಿವೃದ್ಧಿ ಹಾಗೂ ಸುಸಂಘಟಿತ ಆಡಳಿತಕ್ಕಾಗಿ ಗೌರವ ಕಾರ್ಯದರ್ಶಿ ಅಭ್ಯರ್ಥಿ ಶ್ರೀ ಅಮರನಾಥ್ ಶೆಟ್ಟಿ ಹೆಗ್ಗುಂಜೆಯವರಿಗೆ ನಿಮ್ಮ ಅಮೂಲ್ಯ ಮತ ನೀಡಿ ಬೆಂಬಲಿಸಿ. ದೀಪಕ್ ಶೆಟ್ಟರು ಅಧ್ಯಕ್ಷರಾಗಿ ಸಾಗುವಾಗ ಅಮರನಾಥ ಶೆಟ್ಟರಂತವರು ಗೌರವ ಕಾರ್ಯದರ್ಶಿ ಆದರೆ ಅದೊಂದು ಬಂಟರ ಸಂಘದ ಅಭಿವೃದ್ಧಿಯ ಸುವರ್ಣಯುಗ.

Amarnath Shetty a symbol of transparent governance is the candidate for the post of Honorary Secretary of Heggunje

Leave a Comment

Your email address will not be published. Required fields are marked *

Scroll to Top