ಕುಂದಾಪುರದ ಹೈದನ ‘ಅಡ್ವಾನ್ಸ್ಡ್’ ಸಾಧನೆ: JEE ಪರೀಕ್ಷೆಯಲ್ಲಿ ದೇಶಕ್ಕೆ 1005ನೇ ರ್ಯಾಂಕ್ ಪಡೆದ ರಿತಿನ್ ಶೆಟ್ಟಿ
ಕುಂದಾಪುರ: ಕಠಿಣ ಪರಿಶ್ರಮ ಮತ್ತು ಅಚಲ ಗುರಿಯಿದ್ದರೆ ಅಸಾಧ್ಯವಾದುದು ಯಾವುದೂ ಇಲ್ಲ ಎಂಬುದನ್ನು ಕುಂದಾಪುರದ ಮಾಣಿಗರಡಿಯ ತರುಣ ರಿತಿನ್ ಶೆಟ್ಟಿ ಸಾಬೀತುಪಡಿಸಿದ್ದಾರೆ. ದೇಶದ ಅತ್ಯಂತ ಪ್ರತಿಷ್ಠಿತ ತಾಂತ್ರಿಕ ಶಿಕ್ಷಣ ಸಂಸ್ಥೆಗಳ ಪ್ರವೇಶಕ್ಕಾಗಿ ನಡೆಯುವ JEE Advanced ಪರೀಕ್ಷೆಯಲ್ಲಿ ರಿತಿನ್ ಶೆಟ್ಟಿ ರಾಷ್ಟ್ರಮಟ್ಟದಲ್ಲಿ 1005ನೇ ರ್ಯಾಂಕ್ ಪಡೆಯುವ ಮೂಲಕ ಅಪ್ರತಿಮ ಸಾಧನೆ ಮಾಡಿದ್ದಾರೆ. ಕುಂದಾಪುರ ಟು ತೆಲಂಗಾಣ: ರಿತಿನ್ ಶೆಟ್ಟಿ ಸಾಧನೆಯ ಹಾದಿ ಮಾಣಿಗರಡಿಯ ಎಂ. ಸತೀಶ್ ಶೆಟ್ಟಿ ಮತ್ತು ಗೀತಾ ಶೆಟ್ಟಿ ದಂಪತಿಯ ಸುಪುತ್ರನಾದ ರಿತಿನ್ ಶೆಟ್ಟಿ, […]
