ದಿ. ಕಾಶಿ ಶೆಟ್ಟಿ ಸ್ಮರಣಾರ್ಥ ದೇವನಾರಿ ಬಂಗಾಡಿ ಶಾಲೆಯ 60 ವಿದ್ಯಾರ್ಥಿಗಳಿಗೆ ಉಚಿತ ಯೂನಿಫಾರ್ಮ್ ವಿತರಣೆ

ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ, ಪ್ರಸಿದ್ಧ ಸಮಾಜಸೇವಕ ಹಾಗೂ ಉದ್ಯಮಿ ಬರೋಡ ಶಶಿಧರ್ ಶೆಟ್ಟಿ ಅವರ ವತಿಯಿಂದ ದೇವನಾರಿ ಬಂಗಾಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 60 ವಿದ್ಯಾರ್ಥಿಗಳಿಗೆ ಉಚಿತ ಯೂನಿಫಾರ್ಮ್ (ಟಿ-ಶರ್ಟ್ ಮತ್ತು ಪ್ಯಾಂಟ್) ವಿತರಿಸಲಾಯಿತು. ತಮ್ಮ ಪ್ರೀತಿಯ ತಾಯಿ ದಿವಂಗತ ಕಾಶಿ ಶೆಟ್ಟಿ ಅವರ ಸ್ಮರಣಾರ್ಥವಾಗಿ ಶಶಿಧರ್ ಶೆಟ್ಟಿ ಅವರು ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೆ ಈ ಯೂನಿಫಾರ್ಮ್‌ಗಳನ್ನು ದೇಣಿಗೆಯಾಗಿ ನೀಡಿದ್ದಾರೆ. ಉದ್ಯಮಿಯ ಈ ಸಮಾಜಮುಖಿ ಕಾರ್ಯವು ವಿದ್ಯಾರ್ಥಿಗಳಲ್ಲಿ ಹರ್ಷ ಮೂಡಿಸಿದೆ. […]